Posts

Showing posts from December, 2023

IPL 2024 Auction : ವಿಂಡೀಸ್ ಬೌಲರ್​ಗಾಗಿ 11.50 ಕೋಟಿ ರೂ. ಖರ್ಚು ಮಾಡಿದ ಆರ್​ಸಿಬಿ!

Image
  IPL 2024 Auction : ಡೆತ್​ ಓವರ್​ ಸ್ಪೆಷಲಿಸ್ಟ್​ಗಳ ಅಗತ್ಯವನ್ನು ಮನಗಂಡು ಅಲ್ಜಾರಿ ಜೋಸೆಫ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ ಆರ್​ಸಿಬಿ ಫ್ರಾಂಚೈಸಿ. ಬೆಂಗಳೂರು:  ಜೋಶ್​ ಹೇಜಲ್​ವುಡ್​ ಹಾಗೂ ಹರ್ಷಲ್ ಪಟೇಲ್ ಅವರನ್ನು ಕೈಬಿಟ್ಟ ಬಳಿಕ ಉತ್ತಮ ಬೌಲರ್​ಗಳಿಗಾಗಿ ಹೊಂಚು ಹಾಕಿದ್ದ ಆರ್​ಸಿಬಿ ತಂಡ ಐಪಿಎಲ್​ ಹರಾಜಿನಲ್ಲಿ (IPL 2024 Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ತನ್ನದಾಗಿಸಿಕೊಂಡಿದೆ ಅದಕ್ಕಾಗಿ ಬೆಂಗಳೂರು ತಂಡ 11.5 ಕೋಟಿ ರೂಪಾಯಿ ಖರೀದಿ ಮಾಡಿದೆ. ಅಲ್ಜಾರಿ ಜೋಸೆಫ್ ಗಾಗಿ ತೀವ್ರ ಬಿಡ್ಡಿಂಗ್ ಯುದ್ಧ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪೈಪೋಟಿಗೆ ಬಿತ್ತು. ಎರಡು ತಂಡಗಳು ಕೊನೆಯವರೆಗೂ ಮುಂದುವರಿದವು. ಅದಕ್ಕಿಂತ ಹಿಂದ ಪ್ಯಾಟ್ ಕಮಿನ್ಸ್ ಅವರನ್ನು ಕಳೆದುಕೊಂಡಿದ್ದ ಆರ್​ಸಿಬಿ ಅಲ್ಜಾರಿ ಜೋಸೆಫ್ ಖರೀದಿಸಲು ಪಣತೊಟ್ಟಿತು. ಅಲ್ಜಾರಿ ಜೋಸೆಫ್ 19 ಅಂತಾರಾಷ್ಟ್ರೀಯ ಟಿ20​ ಪಂದ್ಯಗಳಲ್ಲಿ 32 ವಿಕೆಟ್​ಗಳನ್ನು. ಪಡೆದಿದ್ದಾರೆ. 40ಕ್ಕೆ 5 ಅವರ ಉತ್ತಮ ಸಾಧನೆಯಾಗಿದೆ. ಅದೇ ರೀತಿ 101 ಟಿ20 ಪಂದ್ಯಗಳಲ್ಲಿ ಅವರು 121 ವಿಕೆಟ್​ ಉರುಳಿಸಿದ್ದು 12ರನ್​ಗೆ 6 ವಿಕೆಟ್ ಉತ್ತಮ ಸಾಧನೆಯಾಗಿದೆ. 2019 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಪ...

ನಾನು ಭಾರತೀಯ, ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ; ಮೊಹಮ್ಮದ್ ಶಮಿ

Image
 ನಾನು ಹೆಮ್ಮೆಯ ಭಾರತೀಯ. ಇಲ್ಲಿ ನನಗೆ ಯಾವುದೇ ಭಯವಿಲ್ಲ. ನಾನು ಸಜ್ದಾ ಮಾಡಲು ಬಯಸಿದ್ದರೆ ಅದನ್ನು ಯಾರು ಕೂಡ ತೆಡೆಯುತ್ತಿರಲಿಲ್ಲ ಎಂದು ಶಮಿ ಆಜ್​ ತಕ್​ ಸಂದರ್ಶನದಲ್ಲಿ ಹೇಳಿದ್ದಾರೆ. ಲಕ್ನೋ:  ಇತ್ತೀಚೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವ ಕಪ್ 2023ರ (ICC World Cup 2023) ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್​ ಪಡೆದ ಬಳಿಕ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಈ ಸಾಧನೆ ಮಾಡಿದ ಕೂಡಲೇ ‘ಸಜ್ದಾ’ (ಮುಸ್ಲಿಂ ನಮಸ್ಕಾರ) ಮಾಡಲು ಮುಂದಾಗಿ ಕೊನೆಗೆ ಟೀಕಾಕಾರರ ಬಾಯಿಗೆ ಆಹಾರವಾಗುತ್ತೇನೆ ಎಂಬ ಭಯದಿಂದ ಇದನ್ನು ನಿಲ್ಲಿಸಿದರೇ ಎಂಬ ವಿಷಯ ಭಾರಿ ಚರ್ಚೆಯಾಗಿತ್ತು. ಇದಕ್ಕೆ ಶಮಿ ಅವರು ಸುಮಾರು ಒಂದು ತಿಂಗಳ ಬಳಿಕ ಉತ್ತರ ನೀಡಿದ್ದಾರೆ. ಆಜ್​ ತಕ್​ ಸಂದರ್ಶನದಲ್ಲಿ ಶಮಿ ಅವರಿಗೆ ಸಂದರ್ಶಕ ಈ ಕುರಿತು ಪ್ರಶ್ನೆಯೊಂದನ್ನು ಕೇಳಿ, ನೀವು ನಿಜವಾಗಿಯೂ ಸಜ್ದಾ (ಪ್ರಾರ್ಥನೆ) ಮಾಡಲು ಮುಂದಾಗಿ ಇದನ್ನು ಅರ್ಧಕ್ಕೆ ನಿಲ್ಲಿಸಿದರೇ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶಮಿ, ನಾನು ಹೆಮ್ಮೆಯ ಭಾರತೀಯ. ಇಲ್ಲಿ ನನಗೆ ಯಾವುದೇ ಭಯವಿಲ್ಲ. ನಾನು ಸಜ್ದಾ ಮಾಡಲು ಬಯಸಿದ್ದರೆ ಅದನ್ನು ಯಾರು ಕೂಡ ತೆಡೆಯುತ್ತಿರಲಿಲ್ಲ. ನಾನು ಸಜ್ದಾ ಮಾಡಬೇಕಾದರೆ, ಅದನ್ನು ಮಾಡುತ್ತೇನೆ, ಏನು ಸಮಸ್ಯೆ?ಎಂದು ಉತ್ತರಿಸಿದರು. “ನನಗೆ ಏನಾದರೂ ಸಮಸ್ಯೆಯಿದ್ದರೆ, ನಾನು ಭಾರತದಲ್ಲಿ ವಾಸಿಸುತ್ತಿರಲಿಲ್ಲ. ...

ICC World Cup 2023 : ಭಾರತಕ್ಕೆ ಲವ್ ಬ್ರೇಕ್ ಅಪ್; ವಿಶ್ವ ಕಪ್​ ಸೋಲಿಗೆ ಆರ್​ಸಿಬಿ ನಾಯಕನ ವಿಶ್ಲೇಷಣೆ

Image
 ವಿಶ್ವಕಪ್ ಫೈನಲ್ ಸೋಲಿನ (ICC World Cup 2023) ಕಾರಣ ಭಾರತೀಯರು ದಕ್ಷಿಣ ಆಫ್ರಿಕಾದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು ಎಂದು ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿ:  ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ (ICC World Cup 2023) ಫೈನಲ್​ನಲ್ಲಿ ಸೋಲಿನ ಪರಿಣಾಮವನ್ನು ಭಾರತೀಯ ಕ್ರಿಕೆಟಿಗರು ಇನ್ನೂ ಅನುಭವಿಸುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್​ನಲ್ಲಿ ಫಾಫ್​ ಡು ಪ್ಲೆಸಿಸ್ ಅವರು ಆರ್​ಸಿಬಿ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ಜತೆ ಅವರು ವಿಶೇಷ ಸಂಬಂಧ ಹೊಂದಿದ್ದಾರೆ. ಅವರೀಗ ಭಾರತ ತಂಡದ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದ್ದು ಈ ನೋವು ಮರೆಯಲು ಸಾಕಷ್ಟು ಸಮಯ ಬೇಕು ಎಂದು ಹೇಳಿದ್ದಾರೆ. ಏಕದಿನ ವಿಶ್ವಕಪ್ 2023 ರ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ 6 ವಿಕೆಟ್​​ಗಳನ್ನು ಸೋಲನ್ನು ಆರ್​ಸಿಬಿ ನಾಯಕ ಲವ್​ ಬ್ರೇಕ್​ಅಪ್​ಗೆ ಹೋಲಿಸಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಸತತ ಹತ್ತು ಪಂದ್ಯಗಳನ್ನು ಗೆದ್ದಿತ್ತು. ಆದರೆ 12 ವರ್ಷಗಳ ನಂತರ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಅವಕಾಶವನ್ನು ಕಳೆದುಕೊಂಡಿತು. ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಸೋಲನ್ನು ಅನುಭವಿಸಿತು. ...

Ind vs Aus : ಭಾರತ ತಂಡಕ್ಕೆ ಕೊನೇ ಪಂದ್ಯದಲ್ಲೂ ಜಯ, 4-1 ಅಂತರದಿಂದ ಸರಣಿ ಕೈವಶ

Image
  ind vs aus : ಸರಣಿಯುದ್ದಕ್ಕೂ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿತಲ್ಲದೆ, ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಬೆಂಗಳೂರು:  ಐದು ಪಂದ್ಯಗಳ ಟಿ20 ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ (ind vs aus) ವಿರುದ್ಧ 6 ರನ್​ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಕೈವಶ ಮಾಡಿಕೊಂಡಿದೆ. ರಾಯ್ಪುರದಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತ ತಂಡ ಸರಣಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ಐದನೇ ಪಂದ್ಯಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಆದಾಗ್ಯೂ ಭಾರತ ತಂಡ ಸರ್ವತೋಮುಖ ಪ್ರದರ್ಶನ ನೀಡುವ ಮೂಲಕ ವಿಜಯ ತನ್ನದಾಗಿಸಿಕೊಂಡಿತು. ವಿಶ್ವ ಕಪ್​ ಫೈನಲ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಸಮಾಧಾನ ಮಾಡಿಕೊಂಡಿತು. ಇದೇ ವೇಳೆ ಒಟ್ಟು 136 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಯನ್ನೂ ಗಳಿಸಿತು. https://www.instagram.com/reel/C0Zd2PwyFhb/?utm_source=ig_embed&ig_rid=89ba2407-4667-45b8-abb4-ec603e1f0a34 ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್​ ಮಾಡಿ ನಿಗದಿತ 20 ಓವರ್​ಗಳಿಗೆ 8 ವಿಕೆಟ್​ ಕಳೆದುಕೊಂಡು 160 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿ...

Mitchell Marsh : ಇನ್ನೊಮ್ಮೆ ವಿಶ್ವಕಪ್ ಮೇಲೆ ಕಾಲಿಡ್ತೇನೆ, ಏನಿವಾಗ? ಆಸ್ಟ್ರೇಲಿಯಾ ಕ್ರಿಕೆಟಿಗನ ಉದ್ಧಟತನ!

Image
  ಭಾರತದ ವಿರುದ್ಧ ಫೈನಲ್‌ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರು ಟ್ರೋಫಿಗೆ ಮುತ್ತಿಕ್ಕಿದ್ದರು. ಆದರೆ, ಮಿಚೆಲ್‌ ಮಾರ್ಷ್‌ ಮಾತ್ರ ಟ್ರೋಫಿ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದರು. ಈಗ ತಮ್ಮ ವರ್ತನೆಯನ್ನು ಮಾರ್ಷ್‌ ಸಮರ್ಥಿಸಿಕೊಂಡಿದ್ದಾರೆ. ಸಿಡ್ನಿ:  ಗೆದ್ದಿದ್ದಕ್ಕೆ, ಗಳಿಸಿದ್ದಕ್ಕೆ ಗೌರವ ನೀಡಬೇಕು ಎಂಬ ಮಾತಿದೆ. ಆದರೆ, ಭಾರತದ ವಿರುದ್ಧ ಗೆದ್ದ ವಿಶ್ವಕಪ್‌ (ICC World Cup 2023) ಟ್ರೋಫಿಯ ಮೇಲೆ ಕಾಲಿಟ್ಟು ದುರಹಂಕಾರ ಮೆರೆದಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್‌ ಮಾರ್ಷ್‌ ಈಗ ಮತ್ತೊಂದು ಉದ್ಧಟತನ ಹೇಳಿಕೆ ನೀಡಿದ್ದಾರೆ. “ನಾನು ಮತ್ತೆ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಡುತ್ತೇನೆ, ಏನಿವಾಗ” ಎಂದು ಹೇಳಿಕೆ ನೀಡುವ ಮೂಲಕ ಮಿಚೆಲ್‌ ಮಾರ್ಷ್‌ (Mitchell Marsh) ಅಹಂಕಾರ ಪ್ರದರ್ಶಿಸಿದ್ದಾರೆ. ಇದರ ಕುರಿತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಿಚೆಲ್‌ ಮಾರ್ಷ್‌, “ನಾನು ಮತ್ತೊಮ್ಮೆ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಡುತ್ತೇನೆ. ಹಾಗಂತ, ನಾನು ವಿಶ್ವಕಪ್‌ ಟ್ರೋಫಿಗೆ ಅಗೌರವ ತೋರಿದೆ ಎಂದು ಅರ್ಥವಲ್ಲ. ಟ್ರೋಫಿ ಮೇಲೆ ಕಾಲಿಟ್ಟಿರುವ ಸಂಗತಿಯನ್ನು ನಾನೇನು ಗಂಭೀರವಾಗಿ ಪರಿಗಣಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಷಯಗಳ ಬಗ್ಗೆಯೂ ನಾನು ಹೆಚ್ಚು ಗಮನ ಹರಿಸಿಲ್ಲ. ಸಾಮಾಜಿಕ ಜಾಲತಾಣಗಳ ಟೀಕೆಗಳ ಬಗ್ಗೆ ಎಲ್ಲರೂ ನನಗೆ ಹೇಳಿದ್ದಾರೆ. ಆದರೆ, ನಾನು ಮತ್...