IPL 2024 Auction : ವಿಂಡೀಸ್ ಬೌಲರ್​ಗಾಗಿ 11.50 ಕೋಟಿ ರೂ. ಖರ್ಚು ಮಾಡಿದ ಆರ್​ಸಿಬಿ!

 IPL 2024 Auction : ಡೆತ್​ ಓವರ್​ ಸ್ಪೆಷಲಿಸ್ಟ್​ಗಳ ಅಗತ್ಯವನ್ನು ಮನಗಂಡು ಅಲ್ಜಾರಿ ಜೋಸೆಫ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ ಆರ್​ಸಿಬಿ ಫ್ರಾಂಚೈಸಿ.



ಬೆಂಗಳೂರು: ಜೋಶ್​ ಹೇಜಲ್​ವುಡ್​ ಹಾಗೂ ಹರ್ಷಲ್ ಪಟೇಲ್ ಅವರನ್ನು ಕೈಬಿಟ್ಟ ಬಳಿಕ ಉತ್ತಮ ಬೌಲರ್​ಗಳಿಗಾಗಿ ಹೊಂಚು ಹಾಕಿದ್ದ ಆರ್​ಸಿಬಿ ತಂಡ ಐಪಿಎಲ್​ ಹರಾಜಿನಲ್ಲಿ (IPL 2024 Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ತನ್ನದಾಗಿಸಿಕೊಂಡಿದೆ ಅದಕ್ಕಾಗಿ ಬೆಂಗಳೂರು ತಂಡ 11.5 ಕೋಟಿ ರೂಪಾಯಿ ಖರೀದಿ ಮಾಡಿದೆ.

ಅಲ್ಜಾರಿ ಜೋಸೆಫ್ ಗಾಗಿ ತೀವ್ರ ಬಿಡ್ಡಿಂಗ್ ಯುದ್ಧ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪೈಪೋಟಿಗೆ ಬಿತ್ತು. ಎರಡು ತಂಡಗಳು ಕೊನೆಯವರೆಗೂ ಮುಂದುವರಿದವು. ಅದಕ್ಕಿಂತ ಹಿಂದ ಪ್ಯಾಟ್ ಕಮಿನ್ಸ್ ಅವರನ್ನು ಕಳೆದುಕೊಂಡಿದ್ದ ಆರ್​ಸಿಬಿ ಅಲ್ಜಾರಿ ಜೋಸೆಫ್ ಖರೀದಿಸಲು ಪಣತೊಟ್ಟಿತು.

ಅಲ್ಜಾರಿ ಜೋಸೆಫ್ 19 ಅಂತಾರಾಷ್ಟ್ರೀಯ ಟಿ20​ ಪಂದ್ಯಗಳಲ್ಲಿ 32 ವಿಕೆಟ್​ಗಳನ್ನು. ಪಡೆದಿದ್ದಾರೆ. 40ಕ್ಕೆ 5 ಅವರ ಉತ್ತಮ ಸಾಧನೆಯಾಗಿದೆ. ಅದೇ ರೀತಿ 101 ಟಿ20 ಪಂದ್ಯಗಳಲ್ಲಿ ಅವರು 121 ವಿಕೆಟ್​ ಉರುಳಿಸಿದ್ದು 12ರನ್​ಗೆ 6 ವಿಕೆಟ್ ಉತ್ತಮ ಸಾಧನೆಯಾಗಿದೆ. 2019 ರಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ ಬಂದ 12 ರನ್​ಗೆ 6 ವಿಕೆಟ್​ ಬೌಲಿಂಗ್​ ಸಾಧನೆ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಅಂಕಿಅಂಶಗಳಾಗಿವೆ. ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿರುವ ಅವರು 19 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ.

24.75 ಕೋಟಿ ರೂ. ಪಡೆದು ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ಕ್​

2024ನೇ ಆವೃತ್ತಿಯ ಐಪಿಎಲ್​ನ ಹರಾಜಿನಲ್ಲಿ (IPL 2024 Auction) ಸಾರ್ವಕಾಲಿಕ ದಾಖಲೆಯೊಂದು ಸೃಷ್ಟಿಯಾಗಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್​ ಐಪಿಎಲ್​ ಹರಾಜಿನ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಅವರು 24.75 ಕೋಟಿ ರೂಪಾಯಿಗೆ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಸೇರಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ತಮ್ಮದೇ ದೇಶದ ಆಟಗಾರ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್​ ಕೆಲವೇ ಕ್ಷಣದ ಹಿಂದೆ ಸೃಷ್ಟಿ ಮಾಡಿದ್ದ 20.50 ಕೋಟಿ ರೂಪಾಯಿಯ ದಾಖಲೆ ಮುರಿದ್ದಾರೆ.

ಪ್ಯಾಟ್​ ಕಮಿನ್ಸ್​ 2 ಕೋಟಿ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರು. ಆರಂಭದಲ್ಲಿ ಅವರಿಗೆ ಮುಂಬಯಿ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟನ್ಸ್ ತಂಡ ಜಿದ್ದಿಗೆ ಬಿದ್ದು ಬಿಡ್​ ಮಾಡಿತು. ಆದರೆ, ಒಂದು ಬಾರಿ 10 ಕೋಟಿ ಗಡಿ ದಾಟುತ್ತಿದ್ದಂತೆ ಕೋಲ್ಕೊತಾ ಹಾಗೂ ಗುಜರಾತ್​ ಜೈಂಟ್ಸ್​ ತಂಡ ಎಡಗೈ ಬೌಲರ್​ಗಾಗಿ ಸತತವಾಗಿ ಬಿಡ್​ ಮಾಡಿತು. ವೇಗದ ಬೌಲರ್​ ಗರಿಷ್ಠ 20 ಕೋಟಿ ರೂಪಾಯಿ ಪಡೆಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಹೊರತಾಗಿಯೂ ಎರಡೂ ತಂಡಗಳು ಎಲ್ಲರ ನಿರೀಕ್ಷೆಯನ್ನ ಮೀರಿ 24.75 ಕೋಟಿ ರೂಪಾಯಿ ಪಡೆದ ಕೆಕೆಆರ್ ತಂಡ ಸೇರಿಕೊಂಡರು.

20 ಕೋಟಿ ಗಡಿ ದಾಟಿಸಿದ ಪ್ಯಾಟ್​ ಕಮಿನ್ಸ್​
ಪ್ರಸಕ್ತ ಸಾಗುತ್ತಿರುವ ಐಪಿಎಲ್​ 2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್​ ವಿಜೇತ ನಾಯಕ ಪ್ಯಾಟ್​ ಕಮಿನ್ಸ್​ ಅವರು 20.50 ಕೋಟಿ ರೂಪಾಯಿ ಪಡೆದಿದ್ದಾರೆ. ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು.

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada Sport News

ಇನ್ನಿತರ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

IPL 2024 Auction : 24.75 ಕೋಟಿ ರೂ. ಪಡೆದು ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ಕ್


Comments

Popular posts from this blog

ICC World Cup 2023 : ಭಾರತಕ್ಕೆ ಲವ್ ಬ್ರೇಕ್ ಅಪ್; ವಿಶ್ವ ಕಪ್​ ಸೋಲಿಗೆ ಆರ್​ಸಿಬಿ ನಾಯಕನ ವಿಶ್ಲೇಷಣೆ

Australia tour of India, 2023 ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್​ ಟಿ20 ಪಂದ್ಯದ ಟಿಕೆಟ್‌ ಸೇಲ್ ದಿನಾಂಕ ಪ್ರಕಟ

ICC World Cup 2023 : ರೋಹಿತ್ ಬಳಗವನ್ನು ಲೇವಡಿ ಮಾಡಿ ವಿವಾದ ಸೃಷ್ಟಿಸಿದ ಆಸೀಸ್​ ನಾಯಕ