ICC World Cup 2023 : ರೋಹಿತ್ ಬಳಗವನ್ನು ಲೇವಡಿ ಮಾಡಿ ವಿವಾದ ಸೃಷ್ಟಿಸಿದ ಆಸೀಸ್​ ನಾಯಕ

 ICC World Cup 2023: ಭಾರತ ತಂಡದ ಆಟಗಾರರು ಆಸೀಸ್​ ಬ್ಯಾಟರ್​​ ಟ್ರಾವಿಡ್ ಹೆಡ್​ ಅವರ ಮಕ್ಕಳು ಎಂಬಂತೆ ಬಿಂಬಿಸಿದ ಚಿತ್ರವನ್ನು ಅವರು ಶೇರ್​ ಮಾಡಿಕೊಂಡಿದ್ದರು.


ಬೆಂಗಳೂರು: ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್​ (ICC World Cup 2023) ಪಂದ್ಯಕ್ಕಿಂತ ಮೊದಲು ಆಸ್ಟ್ರೇಲಿಯಾ ತಂಡ ನಾಯಕ ಪ್ಯಾಟ್​ ಕಮಿನ್ಸ್​ ಮಾತನಾಡಿ ನಿಮ್ಮ 1.3 ಲಕ್ಷ ಅಭಿಮಾನಿಗಳು ಮೌನಕ್ಕೆ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಅದನ್ನು ಅವರ ತಂಡ ಮಾಡಿ ತೋರಿಸಿತ್ತು. ಭಾರತ ತಂಡ ಆರು ವಿಕೆಟ್​ಗಳಿಂದ ಫೈನಲ್​ನಲ್ಲಿ ಸೊಲುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತ್ತು. ಆಸೀಸ್ ಬಳಗಕ್ಕೆ ಆರನೇ ಏಕ ದಿನ ವಿಶ್ವ ಕಪ್​ ಪ್ರಶಸ್ತಿ ದೊರಕಿತ್ತು.

ಅಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿದ್ದರೂ, ಟ್ರಾವಿಸ್ ಹೆಡ್ ಅವರ ಅದ್ಭುತ ಶತಕವು ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಟ್ಟಿತು. 241 ರನ್​ಗಳ ಗುರಿಯನ್ನು ಆರು ವಿಕೆಟ್​​ಗಳು ಬಾಕಿ ಇರುವಾಗ ಬೆನ್ನಟ್ಟಲು ಅವರ ತಂಡಕ್ಕೆ ಸಹಾಯ ಮಾಡಿತ್ತು. ಇದೀಗ ವಿಶ್ವ ಕಪ್​ ವಿಜೇತ ತಂಡ ನಾಯಕ ಪ್ಯಾಟ್ ಕಮಿನ್ಸ್​​ ಭಾರತ ತಂಡದ ಆಟಗಾರರನ್ನು ಲೇವಡಿ ಮಾಡುವ ವಿಡಿಯೊವೊಂದನ್ನು ಶೇರ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಚಾಂಪಿಯನ್ ತಂಡದ ಆಟಗಾರರ ಮನೋವರ್ತನೆಗೆ ನೈಜ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಗೆಲುವಿನ ನಂತರ, ಆಸ್ಟ್ರೇಲಿಯಾದ ಮಾಧ್ಯಮವೊಂದು ಟೀಮ್ ಇಂಡಿಯಾದ ಬಗ್ಗೆ ಅವಹೇಳನಕಾರಿ ಮತ್ತು ಆಕ್ರಮಣಕಾರಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿತ್ತು. ‘ದಕ್ಷಿಣ ಆಸ್ಟ್ರೇಲಿಯಾದ ವ್ಯಕ್ತಿ ವಿಶ್ವ ದಾಖಲೆಯ 11 ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾನೆ’ ಎಂಬ ಶೀರ್ಷಿಕೆಯನ್ನು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಅನ್ನು ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಆರೋನ್ ಫಿಂಚ್ ಲೈಕ್ ಮಾಡಿದ್ದಾರೆ ಅದಕ್ಕೆ ಮೊದಲು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅದನ್ನು ಲೈಕ್ ಮಾಡಿದ್ದರು. ಆದರೆ, ವಿವಾದ ಸೃಷ್ಟಿಯಾದ ಬಳಿಕ ಅವರು ವಾಪಸ್​ ಹೋಗಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 Kannada News

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Latest  Kannada News

Comments

Popular posts from this blog

ICC World Cup 2023 : ಭಾರತಕ್ಕೆ ಲವ್ ಬ್ರೇಕ್ ಅಪ್; ವಿಶ್ವ ಕಪ್​ ಸೋಲಿಗೆ ಆರ್​ಸಿಬಿ ನಾಯಕನ ವಿಶ್ಲೇಷಣೆ

Australia tour of India, 2023 ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್​ ಟಿ20 ಪಂದ್ಯದ ಟಿಕೆಟ್‌ ಸೇಲ್ ದಿನಾಂಕ ಪ್ರಕಟ