IPL 2024 Auction : ವಿಂಡೀಸ್ ಬೌಲರ್ಗಾಗಿ 11.50 ಕೋಟಿ ರೂ. ಖರ್ಚು ಮಾಡಿದ ಆರ್ಸಿಬಿ!
IPL 2024 Auction : ಡೆತ್ ಓವರ್ ಸ್ಪೆಷಲಿಸ್ಟ್ಗಳ ಅಗತ್ಯವನ್ನು ಮನಗಂಡು ಅಲ್ಜಾರಿ ಜೋಸೆಫ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ ಆರ್ಸಿಬಿ ಫ್ರಾಂಚೈಸಿ. ಬೆಂಗಳೂರು: ಜೋಶ್ ಹೇಜಲ್ವುಡ್ ಹಾಗೂ ಹರ್ಷಲ್ ಪಟೇಲ್ ಅವರನ್ನು ಕೈಬಿಟ್ಟ ಬಳಿಕ ಉತ್ತಮ ಬೌಲರ್ಗಳಿಗಾಗಿ ಹೊಂಚು ಹಾಕಿದ್ದ ಆರ್ಸಿಬಿ ತಂಡ ಐಪಿಎಲ್ ಹರಾಜಿನಲ್ಲಿ (IPL 2024 Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ತನ್ನದಾಗಿಸಿಕೊಂಡಿದೆ ಅದಕ್ಕಾಗಿ ಬೆಂಗಳೂರು ತಂಡ 11.5 ಕೋಟಿ ರೂಪಾಯಿ ಖರೀದಿ ಮಾಡಿದೆ. ಅಲ್ಜಾರಿ ಜೋಸೆಫ್ ಗಾಗಿ ತೀವ್ರ ಬಿಡ್ಡಿಂಗ್ ಯುದ್ಧ ನಡೆಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪೈಪೋಟಿಗೆ ಬಿತ್ತು. ಎರಡು ತಂಡಗಳು ಕೊನೆಯವರೆಗೂ ಮುಂದುವರಿದವು. ಅದಕ್ಕಿಂತ ಹಿಂದ ಪ್ಯಾಟ್ ಕಮಿನ್ಸ್ ಅವರನ್ನು ಕಳೆದುಕೊಂಡಿದ್ದ ಆರ್ಸಿಬಿ ಅಲ್ಜಾರಿ ಜೋಸೆಫ್ ಖರೀದಿಸಲು ಪಣತೊಟ್ಟಿತು. ಅಲ್ಜಾರಿ ಜೋಸೆಫ್ 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 32 ವಿಕೆಟ್ಗಳನ್ನು. ಪಡೆದಿದ್ದಾರೆ. 40ಕ್ಕೆ 5 ಅವರ ಉತ್ತಮ ಸಾಧನೆಯಾಗಿದೆ. ಅದೇ ರೀತಿ 101 ಟಿ20 ಪಂದ್ಯಗಳಲ್ಲಿ ಅವರು 121 ವಿಕೆಟ್ ಉರುಳಿಸಿದ್ದು 12ರನ್ಗೆ 6 ವಿಕೆಟ್ ಉತ್ತಮ ಸಾಧನೆಯಾಗಿದೆ. 2019 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಪ...