IPL 2024 : ಆರ್​ಸಿಬಿಯಿಂದ ಹೊರ ಹೋಗಿ ಬೇರೆ ತಂಡದಲ್ಲಿ ಮಿಂಚಿದ ಆಟಗಾರರು ಇವರು

 IPL 2024 : ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮಾಡಿದ ತಪ್ಪುಗಳ ವಿವರ ಇಲ್ಲಿದೆ.



ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತನ್ನ ಕಡೆಯಿಂದ ಆಟಗಾರರನ್ನು ಬಿಡುಗಡೆ ಮಾಡುವಾಗ ತಪ್ಪು ಮಾಡುವ ಅತ್ಯಂತ ದುರದೃಷ್ಟಕರ ತಂಡಗಳಲ್ಲಿ ಒಂದಾಗಿದೆ. ಯಾಕೆಂದರೆ ಆರ್​ಸಿಬಿ ಕೈ ಬಿಟ್ಟ ಆಟಗಾರರು ಮುಂದಿನ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹಲವು ಉದಾಹರಣೆಗಳಿವೆ. ಮುಂದಿನ ಋತುವಿನಲ್ಲಿ ಯಾವ ಆಟಗಾರ ಪರಿಣಾಮಕಾರಿಯಾಗಬಹುದು ಎಂದು ಊಹಿಸಲು ಆರ್​ಸಿಬಿ ಮ್ಯಾನೇಜ್ಮೆಂಟ್ ಸತತವಾಗಿ ವಿಫಲವಾಗಿದೆ. ಹೀಗಾಗಿ ಆ ಆಟಗಾರರೆಲ್ಲರೂ ಇತರ ಫ್ರಾಂಚೈಸಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2024 ರ (IPL 2024) ಹರಾಜಿಗೆ ಮುಂಚಿತವಾಗಿ, ಆರ್​ಸಿಬಿ ಜೋಶ್ ಹೇಜಲ್​ವುಡ್​ , ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಿದೆ. ಇದು ಆರ್​​ಸಿಬಿ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿಯಿಂದ ಹೊರಕ್ಕೆ ಹೋಗಿ ಉತ್ತಮವಾಗಿ ಪ್ರದರ್ಶನ ನೀಡಿದ ಆಟಗಾರರು ಯಾರು ಎಂಬುದನ್ನು ನೋಡೋಣ.

ಕೆಎಲ್ ರಾಹುಲ್

ಕೆಎಲ್ ರಾಹುಲ್ ಅವರನ್ನು 2016ರಲ್ಲಿ ಆರ್​ಸಿಬಿ ಖರೀದಿಸಿತ್ತು. ಅವರು 14 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 397 ರನ್ ಗಳಿಸಿದ್ದರು. ಭುಜದ ಗಾಯದಿಂದಾಗಿ ಕೆಎಲ್ 2017ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. 2018 ರ ಐಪಿಎಲ್ ಋತುವಿನಲ್ಲಿ ಅವರು ಉಳಿಸಿಕೊಳ್ಳುವ ಪಟ್ಟಿಯ ಇರಲಿಲ್ಲ. ನಂತರ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಆಯ್ಕೆ ಮಾಡಿತು. ಅವರು 14 ಪಂದ್ಯಗಳಲ್ಲಿ ಆರು ಅರ್ಧಶತಕಗಳೊಂದಿಗೆ 158.41 ಸ್ಟ್ರೈಕ್​ ರೇಟ್​ನಲ್ಲಿ 659 ರನ್ ಗಳಿಸಿದರು. 14 ಪಂದ್ಯಗಳಲ್ಲಿ 129.34 ಸ್ಟ್ರೈಕ್ ರೇಟ್​ನೊಂದಿಗೆ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 670 ರನ್ ಗಳಿಸುವ ಮೂಲಕ ಅವರು 2020 ರಲ್ಲಿ ‘ಆರೆಂಜ್ ಕ್ಯಾಪ್’ ಗೆದ್ದರು.

ಕ್ರಿಸ್ ಗೇಲ್

ಆರ್​ಸಿಬಿ ತಂಡದ ಜನಪ್ರಿಯ ಆಟಗಾರ ಮತ್ತು ಸ್ಟಾರ್ ಬ್ಯಾಟರ್​ ಕ್ರಿಸ್ ಗೇಲ್ ಆ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಲವಾರು ಅಸಾಧಾರಣ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ . ಅವರು ತಂಡಕ್ಕಾಗಿ 19 ಅರ್ಧಶತಕಗಳು ಮತ್ತು 5 ಶತಕಗಳು ಸೇರಿದಂತೆ 43.33 ಸರಾಸರಿಯಲ್ಲಿ 3,163 ರನ್ ಗಳಿಸಿದ್ದಾರೆ. ಆದರೆ 2018ರಲ್ಲಿ ಅವರನ್ನು ಆರ್​ಸಿಬಿ ಕೈಬಿಟ್ಟಿತು.

 ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 today sports news in kannada 

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada News


Comments

Popular posts from this blog

ICC World Cup 2023 : ಭಾರತಕ್ಕೆ ಲವ್ ಬ್ರೇಕ್ ಅಪ್; ವಿಶ್ವ ಕಪ್​ ಸೋಲಿಗೆ ಆರ್​ಸಿಬಿ ನಾಯಕನ ವಿಶ್ಲೇಷಣೆ

Australia tour of India, 2023 ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್​ ಟಿ20 ಪಂದ್ಯದ ಟಿಕೆಟ್‌ ಸೇಲ್ ದಿನಾಂಕ ಪ್ರಕಟ

ICC World Cup 2023 : ರೋಹಿತ್ ಬಳಗವನ್ನು ಲೇವಡಿ ಮಾಡಿ ವಿವಾದ ಸೃಷ್ಟಿಸಿದ ಆಸೀಸ್​ ನಾಯಕ