Virat Kohli : ವೃತ್ತಿ ಬದುಕಿನಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ನಿರಾಸೆ
ಭಾರತವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3ಟಿ 20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಕೊಹ್ಲಿ (Virat Kohli) ಸೀಮಿತ ಓವರ್ಗಳ ಸರಣಿಯಲ್ಲಿ ಆಡುವುದಿಲ್ಲ ಎಂದು ವರದಿಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್ನಿಂದ ಹೊರಗುಳಿಯಲಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸವು ಡಿಸೆಂಬರ್ 10ರಿಂದ ಪ್ರಾರಂಭವಾಗಲಿದ್ದು, ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಶುರುವಾಗಲಿದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಗೊಂಡಿದೆ. ಪ್ರವಾಸವು ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಕೊನೆಗೊಳ್ಳುತ್ತದೆ, ಇದು ಡಬ್ಲ್ಯುಟಿಸಿ ಋತುವಿನ ಭಾಗವೂ ಆಗಿದೆ. ಈ ಎರಡು ಪಂದ್ಯಗಳಲ್ಲಿ ಕೊಹ್ಲಿ ಆಡಬಹುದು ಎಂದು ವರದಿ ಹೇಳಿದೆ.
ವೈಟ್-ಬಾಲ್ ಕ್ರಿಕೆಟ್ನಲ್ಲಿ ವಿರಾಮದ ಅಗತ್ಯವಿದೆ. ಅದೇ ರೀತಿ ವೈಟ್-ಬಾಲ್ ಕ್ರಿಕೆಟ್ನಲ್ಲಿ ತಮ್ಮ ಭವಿಷ್ಯದ ಬಗ್ಗೆಯೂ ಕೊಹ್ಲಿ ಬಿಸಿಸಿಐ ಮತ್ತು ಆಯ್ಕೆದಾರರಿಗೆ ಮಾಹಿತಿ ನೀಡಿದ್ದಾರೆ” ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
2023ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಅಭಿಯಾನವನ್ನು ನಡೆಸಿದ್ದರು. ಅಲ್ಲಿ ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿ ಸಚಿನ್ ದಾಖಲೆ ಮುರಿದಿದ್ದರು. ವಿಶ್ವಕಪ್ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಸೇರಿದಂತೆ ವಿವಿಧ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಕೊಹ್ಲಿ ಈ ಆವೃತ್ತಿಯಲ್ಲಿ 765 ರನ್ ಸಿಡಿಸಿದ್ದಾರೆ. ಆದಾಗ್ಯೂ ವಿಶ್ವ ಕಪ್ ಪ್ರಶಸ್ತಿಗೆ ಪಾತ್ರವಾಗದೇ ಇರುವುದು ಅವರ ಪಾಲಿಗೆ ವೃತ್ತಿ ಜೀವನದ ದೊಡ್ಡ ಬೇಸರದ ಸಂಗತಿಯಾಗಿದೆ.
ಟ್ರೋಫಿಯನ್ನು ಕಳೆದುಕೊಂಡರೂ, ಕೊಹ್ಲಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರ ಎನಿಸಿಕೊಂಡಿದ್ದರು. ಭಾರತ ತಂಡಕ್ಕೆ ನಿರ್ಣಾಯಕ ಹಂತಗಳಲ್ಲಿ ದೊಡ್ಡ ರನ್ಗಳನ್ನು ತಂದುಕೊಟ್ಟಿದ್ದರು. ಡಬ್ಲ್ಯುಟಿಸಿ ಚಾಂಪಿಯನ್ಶಿಪ್ ಸೇರಿದಂತೆ ಪಂದ್ಯಾವಳಿಯಲ್ಲಿ ಭಾರತವು ದೊಡ್ಡ ರನ್ಗಳನ್ನು ಗಳಿಸಿದಾಗಲೆಲ್ಲಾ ಕೊಹ್ಲಿ ಸುದೀರ್ಘ ಇನಿಂಗ್ಸ್ ಆಡಿದ್ದರು. ಎಲ್ಲ ಕಡೆಯೂ ಭಾರತ ಟ್ರೋಫಿ ಎತ್ತಿಲ್ಲ. ಆದರೆ, ಕೊಹ್ಲಿಯ ಅಬ್ಬರ ಎಲ್ಲೂ ಕಡಿಮೆ ಇರಲಿಲ್ಲ.
ಭಾರತ ತಂಡ ಸದ್ಯ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. 2-1 ಅಂತರದ ಮುನ್ನಡೆ ಸಾಧಿಸಿರುವ ಭಾರತ ತಂಡ ಶುಕ್ರವಾರ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್ಪುರಕ್ಕೆ ಪ್ರಯಾಣ ಬೆಳೆಸಲಿದೆ.
ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 Kannada News
ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada sports news

Comments
Post a Comment