Posts

Showing posts from November, 2023

Virat Kohli : ವೃತ್ತಿ ಬದುಕಿನಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡ ವಿರಾಟ್​ ಕೊಹ್ಲಿ, ಅಭಿಮಾನಿಗಳಿಗೆ ನಿರಾಸೆ

Image
  ಭಾರತವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3ಟಿ 20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಕೊಹ್ಲಿ (Virat Kohli) ಸೀಮಿತ ಓವರ್​ಗಳ ಸರಣಿಯಲ್ಲಿ ಆಡುವುದಿಲ್ಲ ಎಂದು ವರದಿಗಳು ತಿಳಿಸಿವೆ. ಬೆಂಗಳೂರು:  2023 ರ ಏಕದಿನ ವಿಶ್ವಕಪ್​ನ ಫೈನಲ್​ನಲ್ಲಿ ಭಾರತ ತಂಡ ಸೋತ ಬಳಿಕ ತಂಡದ ಪ್ರಮುಖ ಆಟಗಾರರಾದ ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರೀ ನಿರಾಸೆ ಹೊಂದಿದ್ದಾರೆ. ಭಾರವಾದ ಹೃದಯವನ್ನು ಹೊತ್ತುಕೊಂಡು ಅವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಏತನ್ಮಧ್ಯೆ ಅವರಿಬ್ಬರ ಕ್ರಿಕೆಟ್​ ವೃತ್ತಿ ಜೀವನದ ಭವಿಷ್ಯದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ವಿರಾಟ್​ ಕೊಹ್ಲಿ ಸೀಮಿತ ಓವರ್​ಗಳ ಕ್ರಿಕೆಟ್​ನಿಂದ ದೂರ ಇರಬಹುದು ಎಂಬ ಮಾತುಗಳೇ ಕೇಳಿಬರುತ್ತಿತ್ತು. ಅದಕ್ಕೆ ಪೂರಕವಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ಒಡಿಐ ಮತ್ತು ಟಿ20 ಕ್ರಿಕೆಟ್​ನಲ್ಲಿ ಆಡುವುದಿಲ್ಲ ಎಂದು ವರದಿಗಳು ಹೇಳಿವೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್​ನಿಂದ ಹೊರಗುಳಿಯಲಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸವು ಡಿಸೆಂಬರ್ 10ರಿಂದ ಪ್ರಾರಂಭವಾಗಲಿದ್ದು, ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಶುರುವಾಗಲಿದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಗೊಂಡಿದೆ. ಪ್ರವಾಸವು ಎರಡು ಪಂದ್ಯಗಳ ಟೆಸ್ಟ್ ಸರಣಿಯೊ...

IPL 2024 : ಆರ್​ಸಿಬಿಯಿಂದ ಹೊರ ಹೋಗಿ ಬೇರೆ ತಂಡದಲ್ಲಿ ಮಿಂಚಿದ ಆಟಗಾರರು ಇವರು

Image
  IPL 2024 : ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮಾಡಿದ ತಪ್ಪುಗಳ ವಿವರ ಇಲ್ಲಿದೆ. ಬೆಂಗಳೂರು:  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತನ್ನ ಕಡೆಯಿಂದ ಆಟಗಾರರನ್ನು ಬಿಡುಗಡೆ ಮಾಡುವಾಗ ತಪ್ಪು ಮಾಡುವ ಅತ್ಯಂತ ದುರದೃಷ್ಟಕರ ತಂಡಗಳಲ್ಲಿ ಒಂದಾಗಿದೆ. ಯಾಕೆಂದರೆ ಆರ್​ಸಿಬಿ ಕೈ ಬಿಟ್ಟ ಆಟಗಾರರು ಮುಂದಿನ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹಲವು ಉದಾಹರಣೆಗಳಿವೆ. ಮುಂದಿನ ಋತುವಿನಲ್ಲಿ ಯಾವ ಆಟಗಾರ ಪರಿಣಾಮಕಾರಿಯಾಗಬಹುದು ಎಂದು ಊಹಿಸಲು ಆರ್​ಸಿಬಿ ಮ್ಯಾನೇಜ್ಮೆಂಟ್ ಸತತವಾಗಿ ವಿಫಲವಾಗಿದೆ. ಹೀಗಾಗಿ ಆ ಆಟಗಾರರೆಲ್ಲರೂ ಇತರ ಫ್ರಾಂಚೈಸಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2024 ರ (IPL 2024) ಹರಾಜಿಗೆ ಮುಂಚಿತವಾಗಿ, ಆರ್​ಸಿಬಿ ಜೋಶ್ ಹೇಜಲ್​ವುಡ್​ , ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಿದೆ. ಇದು ಆರ್​​ಸಿಬಿ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿಯಿಂದ ಹೊರಕ್ಕೆ ಹೋಗಿ ಉತ್ತಮವಾಗಿ ಪ್ರದರ್ಶನ ನೀಡಿದ ಆಟಗಾರರು ಯಾರು ಎಂಬುದನ್ನು ನೋಡೋಣ. ಕೆಎಲ್ ರಾಹುಲ್ ಕೆಎಲ್ ರಾಹುಲ್ ಅವರನ್ನು 2016ರಲ್ಲಿ ಆರ್​ಸಿಬಿ ಖರೀದಿಸಿತ್ತು. ಅವರು 14 ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 397 ರನ್ ಗಳಿಸಿದ್ದರು. ಭುಜದ ಗಾಯದಿಂದಾಗಿ ಕೆಎಲ್ 2017ರ ಐಪಿಎಲ್ ಟೂರ್ನಿಯಿಂದ ಹೊ...

ICC World Cup 2023 : ರೋಹಿತ್ ಬಳಗವನ್ನು ಲೇವಡಿ ಮಾಡಿ ವಿವಾದ ಸೃಷ್ಟಿಸಿದ ಆಸೀಸ್​ ನಾಯಕ

Image
  ICC World Cup 2023: ಭಾರತ ತಂಡದ ಆಟಗಾರರು ಆಸೀಸ್​ ಬ್ಯಾಟರ್​​ ಟ್ರಾವಿಡ್ ಹೆಡ್​ ಅವರ ಮಕ್ಕಳು ಎಂಬಂತೆ ಬಿಂಬಿಸಿದ ಚಿತ್ರವನ್ನು ಅವರು ಶೇರ್​ ಮಾಡಿಕೊಂಡಿದ್ದರು. ಬೆಂಗಳೂರು:  ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್​ (ICC World Cup 2023) ಪಂದ್ಯಕ್ಕಿಂತ ಮೊದಲು ಆಸ್ಟ್ರೇಲಿಯಾ ತಂಡ ನಾಯಕ ಪ್ಯಾಟ್​ ಕಮಿನ್ಸ್​ ಮಾತನಾಡಿ ನಿಮ್ಮ 1.3 ಲಕ್ಷ ಅಭಿಮಾನಿಗಳು ಮೌನಕ್ಕೆ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಅದನ್ನು ಅವರ ತಂಡ ಮಾಡಿ ತೋರಿಸಿತ್ತು. ಭಾರತ ತಂಡ ಆರು ವಿಕೆಟ್​ಗಳಿಂದ ಫೈನಲ್​ನಲ್ಲಿ ಸೊಲುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತ್ತು. ಆಸೀಸ್ ಬಳಗಕ್ಕೆ ಆರನೇ ಏಕ ದಿನ ವಿಶ್ವ ಕಪ್​ ಪ್ರಶಸ್ತಿ ದೊರಕಿತ್ತು. ಅಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿದ್ದರೂ, ಟ್ರಾವಿಸ್ ಹೆಡ್ ಅವರ ಅದ್ಭುತ ಶತಕವು ಆಸ್ಟ್ರೇಲಿಯಾಕ್ಕೆ ಗೆಲುವು ತಂದುಕೊಟ್ಟಿತು. 241 ರನ್​ಗಳ ಗುರಿಯನ್ನು ಆರು ವಿಕೆಟ್​​ಗಳು ಬಾಕಿ ಇರುವಾಗ ಬೆನ್ನಟ್ಟಲು ಅವರ ತಂಡಕ್ಕೆ ಸಹಾಯ ಮಾಡಿತ್ತು. ಇದೀಗ ವಿಶ್ವ ಕಪ್​ ವಿಜೇತ ತಂಡ ನಾಯಕ ಪ್ಯಾಟ್ ಕಮಿನ್ಸ್​​ ಭಾರತ ತಂಡದ ಆಟಗಾರರನ್ನು ಲೇವಡಿ ಮಾಡುವ ವಿಡಿಯೊವೊಂದನ್ನು ಶೇರ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಚಾಂಪಿಯನ್ ತಂಡದ ಆಟಗಾರರ ಮನೋವರ್ತನೆಗೆ ನೈಜ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆಲುವಿನ ನಂತರ, ಆಸ್ಟ್ರೇಲಿಯಾದ ಮಾಧ್ಯಮವೊಂದು ಟೀಮ್...

Australia tour of India, 2023 ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್​ ಟಿ20 ಪಂದ್ಯದ ಟಿಕೆಟ್‌ ಸೇಲ್ ದಿನಾಂಕ ಪ್ರಕಟ

Image
  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್‌ ಮಾರಾಟ ಆನ್‌ಲೈನ್‌ನಲ್ಲಿ ನವೆಂಬರ್​ 25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ. ಬೆಂಗಳೂರು:  ಪ್ರವಾಸಿ ಆಸ್ಟ್ರೇಲಿಯಾ(Australia tour of India, 2023) ಮತ್ತು ಭಾರತ ನಡುವೆ ಸಾಗುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಸರಣಿಯ ಅಂತಿಮ ಪಂದ್ಯ ಡಿ.3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್​ ಮಾರಾಟದ ದಿನಾಂಕ ಪ್ರಕಟಗೊಂಡಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದ ಟಿಕೆಟ್‌ ಮಾರಾಟ ಆನ್‌ಲೈನ್‌ನಲ್ಲಿ ನವೆಂಬರ್​ 25ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ. ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ನ ಪ್ರತಿಗಳನ್ನು ನವೆಂಬರ್​ 30, ಡಿಸೆಂಬರ್​ 1 ಹಾಗೂ ಡಿಸೆಂಬರ್​ 2ರಂದು ಕ್ರೀಡಾಂಗಣದ ಬಳಿ ಇರುವ ಕೌಂಟರ್‌ಗಳಲ್ಲಿ ಪಡೆಯಬಹುದು ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ. ಕೌಂಟರ್​ ಟಿಕೆಟ್​ಗಳು ಪಂದ್ಯದ ಒಂದು ದಿನ ಮುಂಚಿತವಾಗಿ ಅಥವಾ ಪಂದ್ಯ ನಡೆಯುವ ದಿನಂದೇ ನೀಡುವ ಸಾಧ್ಯತೆ ಇದೆ. ಇದರ ಬಗ್ಗೆ ಕೆಎಸ್‌ಸಿಎ ಯಾವುದೇ ಮಾಹಿತಿ ನೀಡಿಲ್ಲ. ಸದ್ಯ ಆನ್‌ಲೈನ್‌ ಟಿಕೆಟ್​ ಖರೀ...